ನಾಗರಹಾವು - ೧೯೭೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ನಾಗರಹಾವು ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದಾರೆ. == ಪಾತ್ರವರ್ಗ == ರಾಮಾಚಾರಿ - ವಿಷ್ಣುವರ್ಧನ್ ಅಲಮೇಲು - ಆರತಿ ಮಾರ್ಗರೇಟ್ - ಶುಭ ಚಾಮಯ್ಯ ಮೇಷ್ಟ್ರು - ಕೆ ಎಸ್ ಅಶ್ವಥ್ ಜಲೀಲ್ - ಅಂಬರೀಶ್ ವರದ - ಶಿವರಾಂ == ಸ್ವಾರಸ್ಯ == ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ ಅಂಬರೀಶ್ ಅಭಿನಯದ ಮೊದಲ ಚಲನಚಿತ್ರ ಅಂಬರೀಶ್ ಅಭಿನಯದ 'ಜಲೀಲ್' ಪಾತ್ರಕ್ಕೆ ರಜನೀಕಾಂತ್ ಆಯ್ಕೆಯಾಗಿದ್ದರು. ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ನಂತರ ಕಾರಣಾಂತರಗಳಿಂದ ರಜನೀಕಾಂತ್ ಬದಲು ಅಂಬರೀಶ್ ಆ ಪಾತ್ರದಲ್ಲಿ ನಟಿಸಿದರು. ಸ್ಲೋ ಮೋಶನ್ ಕ್ಯಾಮರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ. ಬೆಂಗಳೂರಿನ ೩ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ. ತ.ರಾ.ಸು. ಅವರ ಮೂರು ಕಾದಂಬರಿಗಳನ್ನು (ಸರ್ಪ ಮತ್ಸರ, ಒಂದು ಗಂ‍ಡು ಎರಡು ಹೆಣ್ಣು, ನಾಗರ ಹಾವು) ಸೇರಿ ತಯಾರಿಸಿದ ಚಿತ್ರ.